“ಆಲಯಂ ಸರ್ವ ಭೂತಾನಾಂ ಲಯನಾಂಗಮುಚ್ಚತೆ”
ಚಿದ್ಬ್ರಹ್ಮಾಂಡವೆಂಬ ಭಾಂಡದಲ್ಲಿ ಅನಂತ ವಿಚಿತ್ರ ಭುವನಂಗಳಡಗಿಪ್ಪವಯ್ಯಾ,‘ಆಲಯಂ ಸರ್ವ ಭೂತಾನಾಂ ಲಯನಾಂಗಮುಚ್ಚತೆ’ ಎಂಬುದಾಗಿಅನಂತಕೋಟಿ ಬ್ರಹ್ಮಾಂಡಗಳು ನಿಮ್ಮ ರೋಮಕೂಪದೊಳಗೆ ಅಡಗಿಪ್ಪವೆಂದಡೆ,ಬ್ರಹ್ಮ ವಿಷ್ಣು ರುದ್ರ ಇವರೆಲ್ಲ ಒಂದು ಬ್ರಹ್ಮಾಂಡದೊಳಗಣ ಬಾಲಕರು.ಇವರೆತ್ತ ಬಲ್ಲರೋ ಲಿಂಗದ ನಿಜವ ? ಅಪ್ರಮಾಣ ಅಗೋಚರ ಮಹಾಂತನಿಮ್ಮ ನಿಜದೊಳಗನಾರು ಬಲ್ಲರಯ್ಯಾ ಸೌರಾಷ್ಟ್ರ ಸೋಮೇಶ್ವರಾ ? ಮೇಲಿನ ವಚನದಲ್ಲಿ ಬ್ರಹ್ಮಾಂಡ (galaxy)ವೆಂಬ ಭಾಂಡದಲ್ಲಿ, ಅನಂತ ಮತ್ತು ವಿಚಿತ್ರ ಭುವನಂಗಳು (planets & stars) ಅಡಗಿದ ಬಗ್ಗೆ ತಿಳಿಸಿದ್ದಾರೆ. ಆಧುನಿಕ ವಿಜ್ಞಾನಿಗಳ ಅನಿಸಿಕೆಯಂತೆ ಬಿಲಿಯನ್ ನಕ್ಷತ್ರಗಳ ಸಮೂಹಕ್ಕೆ galaxy ಎಂದು ಕರೆಯುತ್ತಾರೆ, ಇಂತಹ ಬಿಲಿಯನ್ galaxyಗಳು ವಿಶ್ವದಲ್ಲಿ ಚದುರಿದ ಬಗ್ಗೆ ತಿಳಿಸಿದ್ದಾರೆ.ವಿಶ್ವದ ಚಾಲನಾ ಶಕ್ತಿಯನ್ನು ಆದಯ್ಯನವರು ಸೌರಾಷ್ಟ್ರ ಸೋಮೇಶ್ವರನ ರೂಪದಲ್ಲಿ ಕಂಡಿದ್ದಾರೆ.ಮುಂದುವರೆದು ನಾವು ತಿಳಿದಿರುವ ಶಕ್ತಿ ದೇವತೆಗಳೆಲ್ಲ (ಬ್ರಹ್ಮ ವಿಷ್ಣು ರುದ್ರ) ವಿಶ್ವದ ಚಾಲನಾ ಶಕ್ತಿ (ಲಿಂಗ)ಯ ಎದುರು ಬಾಲಕರೆಂದಿದ್ದಾರೆ.ಇದರರ್ಥ ಆದಯ್ಯನವರು ವಿಶ್ವದಲ್ಲಿ ಪಸರಿಸಿರುವ galaxyಗಳ ಬಗ್ಗೆ ಜೊತೆಗೆ ವಿಶ್ವದ ಚಾಲನಾ ಶಕ್ತಿ (cosmic energy)ಯ ಬಗ್ಗೆ ಅರಿತಿದ್ದರು ಎಂಬುದು ಸತ್ಯ. ಅಂದರೆ 12 ನೇ […]