Vinshi Foundation

Recent Articles

“ಆಲಯಂ ಸರ್ವ ಭೂತಾನಾಂ ಲಯನಾಂಗಮುಚ್ಚತೆ”

ಚಿದ್ಬ್ರಹ್ಮಾಂಡವೆಂಬ ಭಾಂಡದಲ್ಲಿ ಅನಂತ ವಿಚಿತ್ರ ಭುವನಂಗಳಡಗಿಪ್ಪವಯ್ಯಾ,‘ಆಲಯಂ ಸರ್ವ ಭೂತಾನಾಂ ಲಯನಾಂಗಮುಚ್ಚತೆ’ ಎಂಬುದಾಗಿಅನಂತಕೋಟಿ ಬ್ರಹ್ಮಾಂಡಗಳು ನಿಮ್ಮ ರೋಮಕೂಪದೊಳಗೆ ಅಡಗಿಪ್ಪವೆಂದಡೆ,ಬ್ರಹ್ಮ ವಿಷ್ಣು ರುದ್ರ ಇವರೆಲ್ಲ ಒಂದು ಬ್ರಹ್ಮಾಂಡದೊಳಗಣ ಬಾಲಕರು.ಇವರೆತ್ತ ಬಲ್ಲರೋ ಲಿಂಗದ ನಿಜವ ? ಅಪ್ರಮಾಣ ಅಗೋಚರ ಮಹಾಂತನಿಮ್ಮ ನಿಜದೊಳಗನಾರು ಬಲ್ಲರಯ್ಯಾ ಸೌರಾಷ್ಟ್ರ ಸೋಮೇಶ್ವರಾ ? ಮೇಲಿನ ವಚನದಲ್ಲಿ ಬ್ರಹ್ಮಾಂಡ (galaxy)ವೆಂಬ ಭಾಂಡದಲ್ಲಿ, ಅನಂತ ಮತ್ತು ವಿಚಿತ್ರ ಭುವನಂಗಳು (planets & stars) ಅಡಗಿದ ಬಗ್ಗೆ ತಿಳಿಸಿದ್ದಾರೆ. ಆಧುನಿಕ ವಿಜ್ಞಾನಿಗಳ ಅನಿಸಿಕೆಯಂತೆ ಬಿಲಿಯನ್ ನಕ್ಷತ್ರಗಳ ಸಮೂಹಕ್ಕೆ galaxy ಎಂದು ಕರೆಯುತ್ತಾರೆ, […]